Wednesday, May 6, 2009

ಓದುವ ಮುನ್ನ...

ಯಕ್ಷಗಾನದಲ್ಲಿ ಸಂಗೀತ , ನಾಟ್ಯ , ಅಭಿನಯ ಮತ್ತು ಮಾತುಗಾರಿಕೆಯನ್ನು ಸಮನ್ವಯಗೊಳಿಸಿ ಕಥೆಯನ್ನು ಪ್ರಸ್ತುತಪಡಿಸಲು ಬಳಸುತ್ತಾರೆ. ಇಲ್ಲಿ ಹಾಡುವ ಸಂಗೀತಕ್ಕೆ ಪ್ರತ್ಯೇಕವಾದ ಸಾಹಿತ್ಯವಿದೆ . ಇದನ್ನೇ ಪ್ರಸಂಗ ಸಾಹಿತ್ಯವೆಂದು ಕರೆಯುತ್ತಾರೆ. ರಂಗದಲ್ಲಿ ಪಾತ್ರದ ಚಿತ್ರಣವು ಹೇಗಿರಬೇಕೆಂದು ಪದ್ಯರೂಪದಲ್ಲಿ ನಿರೂಪಿಸಲ್ಪಡುವ ಸಾಹಿತ್ಯ ಪ್ರಸಂಗವೆನಿಸಿಕೊಳ್ಳುತ್ತದೆ. ಬೇರೆ ಬೇರೆ ರಾಗ, ತಾಳಗಳ ವಿವಿಧ ರೀತಿಯ ಪದ್ಯಗಳನ್ನೊಳಗೊಂಡ ಸಮಗ್ರ ಪಠ್ಯವು ಇಡೀ ಕಥೆಯನ್ನು ವಿವರವಾಗಿ ಚಿತ್ರಿಸುತ್ತದೆ.
ಯಕ್ಷಗಾನದಲ್ಲಿ ಹಲವಾರು ಪ್ರಸಂಗಗಳು ಪ್ರದರ್ಶಿಸಲ್ಪಡುತ್ತದೆ . ಹೀಗೆ ಪ್ರದರ್ಶನಗೊಳ್ಳುವ , ಪ್ರಕಟಿತ ,ಅಪ್ರಕಟಿತ , ಚಾಲ್ತಿಯಾಲಿರುವ ,ಚಲಾವಣೆಯಾಲ್ಲಿ ಇಲ್ಲದಿದ್ದರೂ ಕವಿತಾ ದೃಷ್ಟಿಯಿಂದ ಉತ್ತಮವಾಗಿರುವ ಪ್ರಸಂಗಗಳ ಮೇಲೆ ಬೆಳಕು ಚೆಲ್ಲುವ ಕಿರು ಪ್ರಯತ್ನವೇ ಈ ಪ್ರಸಂಗಾವಲೋಕನ .
ಸಮಯವಿದ್ದಾಗ ಸಮಾನ ಮನಸ್ಕರೊಂದಿಗೆ ಅಪೂರ್ವ ಪ್ರಸಂಗಗಳ ಬಗೆಗಿನ ಕಿರು ಮಾಹಿತಿ , ಆ ಪ್ರಸಂಗದಲ್ಲಿ ತಮಗಿಷ್ಟವಾದ ಪಾತ್ರದ ಬಗ್ಗೆ , ಕಲಾವಿದರ ಬಗ್ಗೆ , ಹಾಗೂ ಆ ಪ್ರದರ್ಶನವನ್ನು ನೋಡಲು ಹೋದಾಗ ಆದ ಹಲವು ರೋಚಕ ಅನುಭವಗಳ ಸಂಕಲನಗಳನ್ನು ಇಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ಆರಂಭಿಸೋಣವೇ ...?

3 comments:

  1. ಶುಭಾಶಯಗಳು ಒಂದು ಉತ್ತಮ ಕೆಲಸದ ಶುಭಾರಂಭವಾಗಿದೆ.. ಅಭಿನಂದನೆಗಳು.. ಮುಂದುವರೆಸಿ.

    ReplyDelete
  2. Please go ahead....great

    ReplyDelete